     ಮೂಲದೊಡನೆ ಹೋಲಿಸಿ
ಒತ್ತಡ: ಬಲ ಮತ್ತು ವಿಸ್ತೀರ್ಣದ ಪ್ರಮಾಣ (ಪ್ರೆಷರ್). ಸಂಮರ್ದ ಪರ್ಯಾಯ ಪದ. ಈ ಬಲ ಂ ವಿಸ್ತೀರ್ಣದಲ್ಲಿ ಪ್ರಯುಕ್ತವಾಗಿದ್ದರೆ ಆ ಬಲದ ಒತ್ತಡ Pಯ ಬೆಲೆಯನ್ನು ಸಮೀಕರಣ ಕೊಡುತ್ತದೆ. ಒತ್ತಡದ ಒಂದು ಮುಖ್ಯ ಗುಣವೆಂದರೆ ಯಾವುದಾದರೂ ಒಂದು ಬಿಂದುವಿನಲ್ಲಿ ಅದರ ಪ್ರಭಾವ ಎಲ್ಲ ದಿಕ್ಕುಗಳಲ್ಲಿಯೂ ಸಮಾನವಾಗಿದೆ. ಸೀಸೆಯಲ್ಲಿ ತುಂಬಿರುವ ನೀರಿನ ಒತ್ತಡ, ಬೆಲೂನಿನಲ್ಲಿ ತುಂಬಿರುವ ಅನಿಲದ ಒತ್ತಡ ಇದಕ್ಕೆ ಉದಾಹರಣೆಗಳು. ಸಮುದ್ರ ಮಟ್ಟದಲ್ಲಿ ವಾಯುಮಂಡಲದ ಒತ್ತಡ ಚದರ ಇಂಚಿಗೆ ಸುಮಾರು 14.7 ಪೌಂಡುಗಳು. ಒತ್ತಾಯ (ಸ್ಟ್ರೆಸ್) ಎನ್ನುವ ಇನ್ನೊಂದು ಪರಿಕಲ್ಪನೆಯನ್ನು ಇಲ್ಲಿ ಪ್ರತ್ಯೇಕಿಸಿ ತಿಳಿಯಬೇಕು. ಒಂದು ಕಂಬ ಒಂದು ಭಾರವನ್ನು ಎತ್ತಿ ಹಿಡಿದಿದ್ದರೆ ಆ ಭಾರವು ಕಂಬದ ಮೇಲೆ ಪ್ರಯುಕ್ತಿಸುವ ಬಲ ಒತ್ತಾಯ; ಇದು ಏಕಮುಖಿಯಾಗಿದೆ; ಎಲ್ಲ ದಿಕ್ಕುಗಳಲ್ಲಿಯೂ ಸಮಾನವಾಗಿಲ್ಲ.
ಒಂದು ಅನಿಲದ ಒತ್ತಡವೂ (P) ಘನ ಗಾತ್ರವೂ (ಗಿ ,ವಾಲ್ಯೂಂ) ಪರಸ್ಪರ ವಿಲೋಮಾನುಪಾತದಲ್ಲಿವೆ. ಎಂದರೆ,
   ಅಥವಾ                               
                                           P ಗಿ =  ಸ್ಥಿರಾಂಕ
ಬಾಯಿಲನ ಸೂತ್ರವೆಂದು ಹೆಸರಿರುವ ಈ ಹೇಳಿಕೆಯಲ್ಲಿ ವಸ್ತುವಿನ ಉಷ್ಣತೆ ಸ್ಥಿರವಾಗಿದೆ ಎಂದು ಭಾವಿಸಲಾಗಿದೆ. ಉಷ್ಣತೆಯು ಒತ್ತಡದ ಮೇಲೆ ಗಮನಾರ್ಹ ಪ್ರಭಾವವನ್ನೇ ಬೀರುವುದು (ನೋಡಿ- ಅಧಿಕಸಂಮರ್ದ; ಅಲ್ಪಸಂಮರ್ದ).	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ